ಕಡಿದಾಳ್ ಮಂಜಪ್ಪ : 1910-92. ಕರ್ನಾಟಕದ ಮಾಜಿ ಮುಖ್ಯ ಮಂತ್ರಿ, ಸ್ವಾತಂತ್ರ್ಯ ಹೊರಾಟಗಾರ, ವಕೀಲ, ರಾಜಕೀಯ ಧುರೀಣ ಹಾಗೂ ಕಾದಂಬರಿಕಾರರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರಾಗೊಳಿಗೆ ಗ್ರಾಮದಲ್ಲಿ. 1910ರಲ್ಲಿ ಬಡ ರೈತರೊಬ್ಬರ ಮಗನಾಗಿ ಹುಟ್ಟಿದ ಇವರು ಬಾಲ್ಯದಲ್ಲಿ ತುಂಬ ಕಷ್ಟಕಾರ್ಪಣ್ಯ ಗಳನ್ನು ಅನುಭವಿಸಿದರು. ದನಕುರಿಗಳನ್ನು ಕಾಯುವುದು, ಗೊಬ್ಬರಗೋಡು ಗಳನ್ನು ಹೊರುವುದು, ಗದ್ದೆ ಉಳುವುದು ಇವೇ ಮುಂತಾದ ಬಾಲ್ಯದ ಕೃಷಿಕ ಜೀವನದ ಅನುಭವ ಗಳು ಮತ್ತು ನಿಸರ್ಗ ರಮಣೀಯ ಮಲೆನಾಡಿನ ಪರಿಸರ ಇವರ ಬಾಳಿನ ಮೇಲೆ ವಿಶೇಷ ಪರಿಣಾಮವನ್ನುಂಟು ಮಾಡಿದುವು.

ಇವರ ವಿದ್ಯಾಭ್ಯಾಸ ಐಗಳ ಮಠದಲ್ಲಿ ಹರಡಿದ ಮರಳುರಾಶಿಯ ಮೇಲೆ ಅಕ್ಷರ ತಿದ್ದುವುದರಿಂದ ಆರಂಭವಾಯಿತು. ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ ಇವರು ಶಿವಮೊಗ್ಗದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಇಂಟರ್ ಮಿಡಿಯೇಟ್ ಪರೀಕ್ಷೆ ಪುರೈಸಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು (1932). ಪುಣೆಯ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಉತ್ತೀರ್ಣರಾದರು (1934).

ಅಲ್ಲಿಂದ ಶಿವಮೊಗ್ಗಕ್ಕೆ ಬಂದು 1935ರಲ್ಲಿ ವಕೀಲ ವೃತ್ತಿಯನ್ನು ಆರಂಬಿsಸಿದರು. ಅದೇ ವರ್ಷ ಅಖಿಲ ಭಾರತ ಕಾಂಗ್ರೆಸ್ಸಿನ ಸದಸ್ಯರಾದರು. ಇವರು ಪ್ರೌಢಶಾಲೆಯಲ್ಲಿದ್ದಾಗ ಶಿವಮೊಗ್ಗಕ್ಕೆ ಬಂದ ಗಾಂದಿsೕಜಿಯವರ ದರ್ಶನದಿಂದಲೂ ಅವರು ಯಂಗ್ಇಂಡಿಯಾ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನ ಗಳಿಂದಲೂ ಪ್ರಭಾವಿತರಾಗಿ ಚಿಕ್ಕಂದಿನಲ್ಲೇ ಇವರಲ್ಲಿ ರಾಷ್ಟ್ರಭಕ್ತಿ ಮೂಡಿ ಇವರು ರಾಜಕೀಯರಂಗಕ್ಕೆದುಮುಕುವಂತೆ ಮಾಡಿತು. 1937ರಿಂದ ಸುಮಾರು ಮೂರು ವರ್ಷ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿಕೆಲಸ ಮಾಡಿದರು. 1942ರಲ್ಲಿ ಕ್ವಿಟ್ಇಂಡಿಯಾಚಳವಳಿಯಲ್ಲಿ ಭಾಗವಹಿಸಿ 9 ತಿಂಗಳು ಸೆರೆಮನೆಯಲ್ಲಿದ್ದರು. ಮೈಸೂರಿನ ಜವಾಬ್ದಾರಿ ಸರ್ಕಾರ ಸ್ಥಾಪನೆಯ ಚಳವಳಿಯ ಸಂಬಂಧದಲ್ಲಿಯೂ ಕೆಲವು ತಿಂಗಳು ಸೆರೆಮನೆವಾಸ ಅನುಭವಿಸಿದರು.

1941-45ರ ಅವದಿsಯಲ್ಲಿ ಮೈಸೂರು ಪ್ರಜಾಪ್ರತಿನಿದಿs ಸಭೆಯ ಕಾಂಗ್ರೆಸ್ ಸದಸ್ಯ ರಾಗಿಯೂ 1942-52ರ ಅವದಿsಯಲ್ಲಿ ಮೈಸೂರು ನ್ಯಾಯವಿಧಾಯಕ ಸಭೆ ಮತ್ತು ರಾಜ್ಯಾಂಗ ಸಭೆಗಳ ಕಾಂಗ್ರೆಸ್ ಸದಸ್ಯರಾಗಿಯೂ 1952-67ರ ಅವದಿsಯಲ್ಲಿ ಮೈಸೂರು ವಿಧಾನಸಭೆಯ ಕಾಂಗ್ರೆಸ್ ಸದಸ್ಯರಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ಈ ಅವದಿsಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಮಂತ್ರಿಯಾಗಿಯೂ ಕೆಲವು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿಯೂ ಇದ್ದರು. 

1962ರಲ್ಲಿ ಬೆಂಗಳೂರಿನಲ್ಲಿ ನೆಲಸಿ ಇವರು ವಕೀಲಿ ಆರಂಬಿsಸಿದರು. ಮಂಜಪ್ಪನವರು ತಮ್ಮ ಖಾಸಗಿ ಹಾಗೂ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿಷಾವಿವಂತಿಕೆ ಮೆರೆದವರು. ಒಳ್ಳೆಯ ವಿಚಾರವಂತರಾದ ಇವರು ಯೌವನದಲ್ಲಿ ನಾಸ್ತಿಕರಂತೆ ಕಂಡರೂ ವಯೋಧರ್ಮ ಹಾಗೂ ಜೀವನದ ಅನುಭವಗಳಿಂದ ಪುರ್ಣ ಆಸ್ತಿಕರಾಗಿದ್ದರು. ಇವರು ಕಾದಂಬರಿಕಾರರಾಗಿ ಹೆಸರು ಗಳಿಸಿದರು. ಇವರು ಪಂಜರವಳ್ಳಿಯ ಪಂಜು (1963) ಎಂಬ ಕಾದಂಬರಿಯಲ್ಲಿ ಮಲೆನಾಡಿನ ನಿಸರ್ಗ ಸೌಂದರ್ಯವನ್ನೂ ಅಲ್ಲಿಯ ಜನಜೀವನವನ್ನೂ ಯಥಾವತ್ತಾಗಿ ಚಿತ್ರಿಸಿದ್ದಾರೆ. ಮೂರು ತಲೆಮಾರಿನ ಕಥೆ ತಿಳಿಸುವ ಈ ಕಾದಂಬರಿಯಲ್ಲಿ ರಾಜಕಾರಣದಲ್ಲಿ ಗಾಂದಿsೕತತ್ತºಗಳ ಅನುಷಾವಿನ ಅಗತ್ಯವೆಂದು ಹೇಳಿ ಕಾಂಗ್ರೆಸ್ಸಿನ ಧ್ಯೇಯ - ಧೋರಣೆ - ಸಾಧನೆಗಳನ್ನು ತಿಳಿಸಲಾಗಿದೆ. ಈ ಪುಸ್ತಕ ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದವಾಗಿದೆ. ನಾಳೆಯ ನೆಳಲು (1966) ಇವರ ಇನ್ನೊಂದು ಕಾದಂಬರಿ. ಸಾರ್ವಜನಿಕ ಜೀವನದ ಶುದ್ಧೀಕರಣ ಈ ಕಾದಂಬರಿಯ ಮುಖ್ಯ ಉದ್ದೇಶ. ಕ್ರಾಂತಿಕೂಟ (1974) ಇವರ ಮತ್ತೊಂದು ಕಾದಂಬರಿ. ನನಸಾಗದ ಕನಸು ಎಂಬುದು ಇವರ ಆತ್ಮಚರಿತ್ರೆ. ಕಾಯಕವೇ ಕೈಲಾಸ ಎಂಬ ತತ್ವಕ್ಕನುಗುಣವಾಗಿ ಇವರು ತಾವು ಸಕ್ರಿಯರಾಗಿರುವವರೆಗೂ ವಕೀಲವೃತ್ತಿ ನಡೆಸಿದರು. ಮಲೆನಾಡ ಗಾಂದಿs ಎಂಬ ಅಬಿsದಾನಕ್ಕೆ ಪಾತ್ರರಾಗಿದ್ದ ಇವರದು ಆದರ್ಶ ತುಂಬಿದ ಬದುಕು. ಸರ್.ಎಂ.ವಿಶ್ವೇಶ್ವರಯ್ಯನವರು ಇವರನ್ನು ತುಂಬಾ ಮೆಚ್ಚಿಕೊಂಡಿದ್ದರು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ